DK SHIVAKUMAR

the Man...the Vision...the Plan...

By Birth I am an Agriculturist, by Profession I am a Businessman, by Choice I am an Educationist, by Passion I am a Politician. As a Boy from Kanakapura to a Leader of National Stature, DK Shivakumar's is a Unique Political Journey.

logo

A Man of Action

logo

A Man of Vision

logo

A Man of Passion

DK SHIVAKUMAR - THE LEGEND

Doddalahalli Kempegowda Shivakumar (born 15 May 1962) is an Indian politician and businessman who is currently serving as the President of the Karnataka Pradesh Congress Committee (KPCC). He was the Cabinet Minister for Major Irrigation in the ministry of Chief Minister H. D. Kumaraswamy from 2018-19. Previously he served as the Minister for Energy in the Government of Karnataka under Siddaramaiah. He is an MLA from Kanakapura constituency....
The story of a Successful Businessman
He is one of the top among successful businessmen-politicians in Karnataka. His parents did not have kids for three years after marriage. So they went to a Shiva temple and prayed to Lord Shiva to grace them with a child. When they had a boy child, they named the child “Shivakumar” literally meaning Shiva's child.



A LEADER IN SCHOOL

A child was expelled from National Public School in the early 1970s. The boy’s father had brought him to Bangalore from a small village in Kanakapura Taluk, about sixty kilometres away from Bangalore city. The father wanted his little son to get the best education possible and enrolled him in one of the best English schools in Bangalore, which was then called National English School, situated in Rajajinagar....
The school was established by Shri Gopalakrishna, an eminent and principled educationist who did not encourage any kind of highhandedness or indiscipline. The naughty boy became quite a handful for the teachers and he was expelled and told to never come back. The father somehow convinced the school to take the child back atleast when he was ready for high school and took the little boy to Carmel School in Basaveshwarnagar, which was a fledgling English school in that area. The child contested in school election and though was eligible to become the president of the children’s union, he was only made the Sports secretary. The boy who won under a symbol that he was allowed to choose, won hands down and was a smart and sparkling student just like the star symbol he chose for his election.
After completing 7 th in Carmel school the boy was taken by his father back to Shri Gopalakrishna who refused to entertain the boy and his father. The father who was well connected politically spoke to a few of his influential political friends and got them to influence upon the school head. Mr Gopalkrishna refused to budge. The father took the issue to the then chief minister Shri Devaraj Urs. Mr Urs called Mr Gopalkrishna to his official residence and urged him to accommodate the child in his school. In spite of the CM telling him, Mr Gopalkrishna refused to budge. Failing to get a seat for the child in the much sought after school of Mr Gopalkrishna, the government it was decided that the boy would be accommodated in Vidyavardhaka School. But Vidyavardhaka School did not have a high school. The government gave permission to Vidyavardhaka School to start high school, almost like only to accommodate this naughty boy.
The boy who was not so much into academics was popular with other kids in the school. He was their natural leader and a maverick for everyone to see. After completing his tenth, the boy joined HKES College to do his PUC. He won student elections in PUC too and was growing as a powerful student leader. After finishing PUC the young man joined SJR College in Bangalore. Here he was active in student politics and started learning the nuances of a political career hobnobbing with the high and mighty of politics in those days. Before he could finish his final year degree, he was in full time politics and in a year or two he was contesting against Deve Gowda with a Congress ticket.
This way, the boy who started his education in St Rita School in Kanakapura, grew up into a full time career politician in Bangalore, and is today known as the Lion of Karnataka. He is presently the president of KPCC and every party man of his is proud to chant his name – D K Shivakumar

logo
logo

Please give a missed call to :

our political Experience

Political Timeline 2018

2018 In the state election he got re-elected from Kanakapura and held the post of Minister for Major Irrigation and Medical Education.
2013 In 2013 to 2018 he was re-elected as an MLA from Kanakapura and was assigned the role of Minister for Energy under Siddaramaiah government.
2008 He was elected from Kanapura
2004 He emerged as a winner from Sathanur again in Assembly elections.
1999 He was elected from Satanur and was made a minister in the SM Krishan government. He was put incharge of the Urban Development Ministry and also became the Chairman of Karnataka State Town and City Planning.
He played an instrumental role in making Mr S M Krishna a Rajya Sabha member. He also put his strength behind Mr Krishna in him winning a thumping majority and forming the government in Karnataka with 139 in the Assembly elections.

Read DK Shivakumar's biography in Kannada:

ಶಿವಕುಮಾರ್ ಎಂಬ ‘ಟ್ರಬಲ್ ಶೂಟರ್’
ಕರ್ನಾಟಕ ರಾಜ್ಯದ ರಾಜಕೀಯ ರಂಗದಲ್ಲಿ ಎದ್ದು ಕಾಣುವ ಹೆಸರು ಡಿ ಕೆ ಶಿವಕುಮಾರ್. ಪಕ್ಷದ ಹೈಕಮಾಂಡ್ ಪಾಲಿಗೆ ಶಿವಕುಮಾರ್ ‘ಟ್ರಬಲ್ ಶೂಟರ್’; ಮಾಧ್ಯಮದ ಡಿಕೆಶಿ ಆದರೆ ಜನರ ಬಾಯಲ್ಲಿ ಇವರು ‘ಡಿಕೆ’ ಎಂದೇ ಪ್ರಚಲಿತರು.
ಶಿವಕುಮಾರ್ ಜನಿಸಿದ್ದು ಬೆಂಗಳೂರು ಜಿಲ್ಲೆಯ ಕನಕಪುರ ತಾಲೂಕಿನಲ್ಲಿ. ತಂದೆ ಕೆಂಪೇಗೌಡ, ತಾಯಿ ಗೌರಮ್ಮ. 7ನೇ ತರಗತಿಯಲ್ಲಿದ್ದಾಗಲೇ ರಾಜಕೀಯದ ಆಸಕ್ತಿ ಹೊಂದಿದ್ದ ಶಿವಕುಮಾರ್ ಹುಡುಗರ ಗುಂಪಿನಲ್ಲಿ ನಾಯಕನಾಗೋದು, ಶಾಲೆಯಲ್ಲಿ ಲೀಡರ್ ಪಟ್ಟಕ್ಕೆ ಏರುವುದು ಆಟೋಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು ಹೀಗೆ ಸಹಪಾಠಿಗಳ ಪೈಕಿ ಜನಪ್ರಿಯರಾಗಿದ್ದರು.
ಕನಕಪುರದ ಸೈನ್ಟ್ ರೀಟಾಸ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಆರಂಭಿಸಿದ ಶಿವಕುಮಾರ್ ಆನಂತರ ಬೆಂಗಳೂರಿನಲ್ಲಿ ಶಾಲಾಭ್ಯಾಸವನ್ನು ಮುಂದುವರೆಸಿದರು. ಬೆಂಗಳೂರಿನ ಪ್ರತಿಷ್ಠಿತ ನ್ಯಾಷನಲ್ ಪಬಲಿಕ್ ಸ್ಕೂಲ್, ಬಸವೇಶ್ವರನಗರದ ಕಾರ್ಮೆಲ್ ಸ್ಕೂಲ್ ಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ ನಗರದ ಹೆಸರಾಂತ ವಿದ್ಯಾ ಸಂಸ್ಥೆ ವಿದ್ಯಾವರ್ಧಕ ಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಸಂಪನ್ನ ಗೊಳಿಸಿದರು. ಆನಂತರ HKES ಕಾಲೇಜಿನಲ್ಲಿ ಪಿ ಯು ಸಿ ವ್ಯಾಸಂಗ ಮಾಡಿದ ಶಿವಕುಮಾರ್ ಆಮೇಲೆ SJRC ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕೆ ಸೇರ್ಪಡೆಗೊಂಡರು.
... ವ್ಯಾಸಂಗ ಮುಂದುವರಿಸುತ್ತಲೇ ಸಕ್ರಿಯ ರಾಜಕಾರಣದಲ್ಲಿ ಇವರು ಹೆಜ್ಜೆ ಇಡತೊಡಗಿದರು ಕಾಲೇಜಿನಲ್ಲಿದ್ದಾಗಲೇ ಕಾಂಗ್ರೆಸ್ ಪಕ್ಷಕ್ಕೆ ಆಕರ್ಷಿತರಾಗಿ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸತೊಡಗಿದ ಇವರು ಜನಪರ ಹೋರಾಟ ಮತ್ತು ಸಮಾಜಮುಖಿ ಕೆಲಸಗಳ ಕಡೆ ಒಲವು ಹೆಚ್ಚಾದ ಕಾರಣ ಕೇವಲ 21 ವರ್ಷದವರಾಗಿರುವಾಗಲೇ ರಾಜಕೀಯದ ಅಖಾಡ ಪ್ರವೇಶಿಸಿದ ಹೆಗ್ಗಳಿಕೆ ಪಾತ್ರರಾದರು. ಸ್ಥಳೀಯ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕರಾಗಿದ್ದು ನೇಮಕವಾಗಿದ್ದು ಇವರ ರಾಜಕಾರಣಕ್ಕೆ ಮುನ್ನುಡಿಯಾಯಿತು.ವ್ಯಾಸಂಗ ಪೂರ್ಣಗೊಳಿಸುವ ಮೊದಲೇ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಾಗ ಆ ಅವಕಾಶವನ್ನು ಸ್ವೀಕರಿಸುವ ಎದೆಗಾರಿಕೆ ತೋರಿದ್ದು ಇವರ ವ್ಯಕ್ತಿತ್ವದ ವಿಶೇಷ. NSUI, ಯುವಕಾಂಗ್ರೆಸ್ ಹೀಗೆ ಪಕ್ಷದ ಕೆಳಹಂತದಿಂತ ಮೇಲೇರಿ ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ, ಸಚಿವ ಮುಂತಾದ ವಿವಿಧ ಸ್ತರಗಳಲ್ಲಿದ್ದು ಜನಸೇವೆ ಮಾಡಿದ ಇವರು ಒಂದೊಂದು ಹಂತದಲ್ಲೂ ರಾಜಕೀಯದ ವೈವಿಧ್ಯಮಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತ, ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಮೊದಲ್ಗೊಂಡು ಉನ್ನತ ನಾಯಕರು, ಪದಾಧಿಕಾರಿಗಳವರೆಗೆ ಎಲ್ಲರೊಂದಿಗೆ ತಮ್ಮ ಪ್ರಭಾವ ಬೆಳೆಸಿಕೊಳ್ಳುತ್ತ ಹೋದರು. ೧೯೮೫ ರಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿತ್ತು. ಮಹತ್ವಾಕಾಂಕ್ಷಿ ಶಿವಕುಮಾರ್ ಸಾತನೂರು ಕ್ಷೇತ್ರದಿಂದ ಅಖಾಡಕ್ಕೆ ಇಳಿದೇಬಿಟ್ಟರು. ಅಂದು ಅವರಿಗೆ ಎದುರಾಳಿಯಾಗಿದ್ದವರೂ ಸಾಮಾನ್ಯರಲ್ಲ, ಜನತಾಪಕ್ಷದಿಂದ ಸ್ಪರ್ಧಿಸಿದ್ದ ಎಚ್.ಡಿ. ದೇವೇಗೌಡರು ಶಿವಕುಮಾರ್ ಅವರ ಪ್ರತಿಸ್ಪರ್ಧಿಯಾಗಿದ್ದರು. ಆ ಚುನಾವಣೆಯಲ್ಲಿ ಯುವಕ ಶಿವಕುಮಾರ್‌ಗೆ ವಿಜಯಲಕ್ಷ್ಮಿ ಒಲಿಯಲಿಲ್ಲ. ಹಾಗಂತ ಶಿವಕುಮಾರ್ ಧೃತಿಗೆಡಲಿಲ್ಲ ಮತ್ತು ಸುಮ್ಮನೆ ಕೂರಲಿಲ್ಲ; 1987ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸಾರ್ವಜನಿಕ ಜೀವನಕ್ಕೆ ಮತ್ತಷ್ಟು ಸಾಣೆ ಹಿಡಿದುಕೊಂಡರು. ನೋಡನೋಡುತ್ತಿದ್ದಂತೆ 1989ರ ವಿಧಾನಸಭಾ ಚುನಾವಣೆ ಬರುತ್ತಿದ್ದಂತೆಯೇ ಮತ್ತೊಮ್ಮೆ ಸಾತನೂರು ಕ್ಷೇತ್ರದಲ್ಲೇ ಅದೃಷ್ಟ ಪರೀಕ್ಷೆಗಿಳಿದ ಶಿವಕುಮಾರ್‌ಗೆ ಈ ಬಾರಿ ಅದೃಷ್ಟಲಕ್ಷ್ಮಿ ಕೈಹಿಡಿದುಬಿಟ್ಟಳು. ಚುನಾವಣೆಯಲ್ಲಿ ಗೆದ್ದ ಶಿವಕುಮಾರ್ ಮೊಟ್ಟಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಆಗ ಶಿವಕುಮಾರ್ ಅವರು ೨೯ ರ ಹರೆಯದ ಯುವಕ.
1994ರ ಚುನಾವಣೆಯಲ್ಲಿ ಶಿವಕುಮಾರ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿತು. ಛಲಬಿಡದ ಶಿವಕುಮಾರ್ ಪಕ್ಷೇತರರಾಗೇ ಸ್ಪರ್ಧಿಸಿ ಎದುರಾಳಿಗಳ ವಿರುದ್ಧ ತೊಡೆತಟ್ಟಿ ಜಯಗಳಿಸಿಬಿಟ್ಟರು. ಆ ಜಯದ ಹುರುಪಿನೊಂದಿಗೆ ಪಕ್ಷದ ತೆಕ್ಕೆಗೆ ಮರಳಿಬಿಟ್ಟರು. ಇವರ ಜೈತ್ರಯಾತ್ರೆ 1999ರಲ್ಲೂ ಮುಂದುವರಿಯಿತು. ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದ ಶಿವಕುಮಾರ್ ನಂತರ 2004ರಲ್ಲೂ ಆ ಯಶಸ್ಸನ್ನು ಪುನರಾವರ್ತನೆ ಮಾಡಿದರು.
ವಿಧಾನಸಭಾ ಕ್ಷೇತ್ರಗಳ ಮರುವಿಂಗಡಣೆಯಿಂದಾಗಿ ಕನಕಪುರ ಕ್ಷೇತ್ರದಲ್ಲಿ ಸಾತನೂರು ವಿಲೀನಗೊಂಡಿತು. ಹೀಗಾಗಿ 2008ರಲ್ಲಿ ಕನಕಪುರದಿಂದ ಗೆದ್ದ ಶಿವಕುಮಾರ್, ನಂತರ 2013ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪಿ.ಜಿ.ಆರ್. ಸಿಂಧ್ಯಾರನ್ನು ಮಣಿಸಿದರು. 2018 ರಲ್ಲಿ ಅಗಾಧ ಬಹುಮತದೊಂದಿಗೆ ಡಿಕೆ ಶಿವಕುಮಾರ್ ಏಳನೇ ಬಾರಿಗೆ ವಿಧಾನ ಸಭೆಗೆ ಆಯ್ಕೆಯಾದರು. ಎಸ್. ಬಂಗಾರಪ್ಪ, ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ ಸರ್ಕಾರಗಳಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ ಹೆಗ್ಗಳಿಕೆ ಶಿವಕುಮಾರ್ ಅವರದ್ದು. ಬಂದೀಖಾನೆ ಮತ್ತು ಗೃಹರಕ್ಷಕ ದಳ, ನಗರಾಭಿವೃದ್ಧಿ, ಸಹಕಾರ, ವಿದ್ಯುತ್, ಭಾರಿ ನೀರಾವರಿ, ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ ಯಂಥ ಖಾತೆಗಳನ್ನು ನಿರ್ವಹಿಸಿದ ಹೆಗ್ಗಳಿಕೆ ಶಿವಕುಮಾರ್ ಅವರದ್ದು. 2001ರಲ್ಲಿ ಎಐಸಿಸಿ ಸದಸ್ಯ, 1985ರಿಂದ 2001ರ ತನಕ ಕೆಪಿಸಿಸಿ ಕಾರ್ಯದರ್ಶಿ, 2008 ರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ 2013 ಮತ್ತು 2018ರ ಚುನಾವಣೆಗಳಲ್ಲಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ಹೀಗೆ ವಿಭಿನ್ನ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದರು ಶಿವಕುಮಾರ್.
2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿ ಸರ್ಕಾರ ರಚನೆಯಾಗಿ ಒಂದು ವರ್ಷದ ನಂತರ ಶಿವಕುಮಾರ್ ಅವರಿಗೆ ‘ಸಂಪುಟ ಭಾಗ್ಯ’ ದಕ್ಕಿತು, ಇಂಧನ ಖಾತೆಯ ನೊಗ ಹೆಗಲೇರಿತು. ರಾಜಕೀಯದಲ್ಲಿ ಅಗಾಧ ಯಶಸ್ಸನ್ನು ಕಂಡಿರುವ ಡಿಕೆ ತಮ್ಮ ಸೋದರ ಡಿ.ಕೆ. ಸುರೇಶ್‌ರನ್ನು ಸಂಸದರನ್ನಾಗಿಸುವಲ್ಲಿ ಯಶ ಕಂಡಿದ್ದಾರೆ. ರಾಜಕೀಯ ದಿಗ್ಗಜ ದೇವೇಗೌಡರ ಎದುರು ಓರ್ವ ರಾಜಕೀಯ ಅನಾನುಭವಿಯನ್ನು ಅಭ್ಯರ್ಥಿಯಾಗಿ ನಿಲ್ಲಿಸಿ ಗೆಲ್ಲಿಸಿ ಕೊಂಡವರೆಂಬುದು ಜಗಜ್ಜಾಹೀರಾಗಿದೆ. ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ ಎಚ್.ಡಿ. ದೇವೇಗೌಡರ ಕುಟುಂಬ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಈ ಎರದೂ ಪಾಲಯಗಳ ಮಧ್ಯೆ ಕಡ್ಡಿಗೀರದಿದ್ದರೂ ಬೆಂಕಿ ಹೊತ್ತಿಕೊಳ್ಳುವಂಥ ಪರಿಸ್ಥಿತಿಯಿತ್ತು. ಆದರೆ ಅದು ಕ್ರಮೇಣ ತಣ್ಣಗಾಯಿತು. ೨೦೧೮ ರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿ ಎಚ್ ಡಿ ಕೆ ಮುಖ್ಯಮಂತ್ರಿಯಾಗುವುದರಲ್ಲಿ ಡಿಕೆಶಿವಕುಮಾರ್ ಅವರ ಪಾತ್ರ ದೊಡ್ಡದೇ ಇತ್ತು. ಕರ್ನಾಟಕದ ರಾಜಕಾರಣ ಮಾತ್ರವಲ್ಲದೆ ದೇಶದ ಇತರೆಡೆಯೂ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕೆಲವೊಮ್ಮೆ ಕೊಡುಗೆ ಸಹಕಾರ ನೀಡಿದ ಶಿವಕುಮಾರ್ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉಳಿಸುವಲ್ಲಿಯೂ ಯಶಸ್ಸು ಕಂಡಿದ್ದಾರೆ. ಬಿಹಾರ, ರಾಜಸ್ತಾನ ಅಸ್ಸಾಮ್ ಕೇರಳ ತಮಿಳ್ನಾಡು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿಯನ್ನು ಹೊತ್ತು ಸಮರ್ಥ ವಾಗಿ ನಿಭಾಯಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಡಿಮೊನೆಟೈಝೆಶನ್ ಆದ ಸಂದರ್ಭಲ್ಲಿ ಪಕ್ಷದ ವತಿಯಿಂದ ರಾಷ್ಟಮಟ್ಟದ ಜವಾಬ್ದಾರಿಯೊಂದಿಗೆ ದಕ್ಷಿಣ ಭಾರತದ ಉಸ್ತುವಾರಿಯನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸಿದ್ದು ಗಮನಾರ್ಹವಾಗಿದೆ. ಮಹಾರಾಷ್ಟ್ರದ ವಿಲಾಸ್ ರಾವ್ ದೇಶಮುಖ್ ಸರ್ಕಾರ ಉಳಿಸಿದ್ದು, ಹಿರಿಯ ನಾಯಕ ಅಹ್ಮದ್ ಪಟೇಲ್ ಅವರ ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತಿನ ಕಾಂಗ್ರೆಸ್ ಶಾಸಕರನ್ನು ನಿಭಾಯಿಸಿ ರಾಷ್ಟ್ರದ ಗಮನ ಸೆಳೆದು ಪಟೇಲ್ ಅವರು ಗೆಲ್ಲುವಂತೆ ನೋಡಿಕೊಂಡಿದ್ದು ಇವರ ಬಗ್ಗೆ ಪಕ್ಷದ ವರಿಷ್ಠರ ಒಲವನ್ನು ಹೆಚ್ಚಿಸಿತು. ಈ ಎಲ್ಲಾ ಯಶಸ್ಸು ಇವರ ರಾಜಕೀಯ ವಿರೋಧಿಗಳ ಕಣ್ಣು ಕೆಂಪಾಗಿಸಿದ್ದು ಎಲ್ಲರಿಗೂ ತಿಳಿದಿದೆ. ಇವರನ್ನು ರಾಜಕೀಯವಾಗಿ ಮಣಿಸಲು ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಅದರ ಮುಂದುವರೆದ ಭಾಗವಾಗಿ 2017ರಲ್ಲಿ ಶಿವಕುಮಾರ್ ನಿವಾಸದ ಮೇಲೆ ನಡೆದ ಆದಾಯ ತೆರಿಗೆ ಇಲಾಖೆಯ ದಾಳಿ ನಡೆಯಿತು. ಇದು ರಾಷ್ಟ್ರ ಮಟ್ಟದಲ್ಲಿದೊಡ್ಡ ಸುದ್ದಿಯಾಗಿ ಚರ್ಚೆಗೆ ಗ್ರಾಸವಾಯಿತು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಇದ್ದು ಮುಖ್ಯ ವಿಷಯವಾಗಿಬಿಟ್ಟಿತು. ದೇಶದಾದ್ಯಂತ ಇವರ ಬೆಂಬಲಿಗರು ಪ್ರತಿಭಟನೆ ನಡೆಸಿ ತಮ್ಮ ನೆಚ್ಚಿನ ನಾಯಕನಿಗೆ ನೈತಿಕ ಬೆಂಬಲವನ್ನು ನೀಡಿದರು. ಕರ್ನಾಟಕದಿಂದ ಸಾವಿರಗಟ್ಟಲೆ ಜನ ಶಿವಕುಮಾರ ಅವರನ್ನು ಭೇಟಿಯಾಗಲು ದೆಹಲಿಗೆ ಹೋಗಿದ್ದು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಒಂದು ಅಪೂರ್ವ ಘಟನೆ. ಶಿವಕುಮಾರ್ ಜೈಲಿನಲ್ಲಿದ್ದಾಗ ಲಕ್ಷೋಪಲಕ್ಷ ಜನ ಬೆಂಗಳೂರಿನಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಪಕ್ಷ ಜಾತಿ ಧರ್ಮ ಮರೆತು ಶಿವಕುಮಾರ್ ತಮ್ಮ ನಾಯಕ ಎಂದು ಘಂಟಾಘೋಷವಾಗಿ ಸಾರಿದರು. ಇದು ರಾಜಕೀಯ ವಲಯಗಳಲ್ಲಿ ಸಂಚಲನ ಉಂಟುಮಾಡಿತ್ತು. ಅಧಿಕಾರಿಗಳ ಕಿರುಕುಳ ರಾಜಕೀಯ ಪ್ರೇರಿತ ಎಂಬ ಮಾತು ಎಲ್ಲೆಡೆ ಹರಿದಾಡತೊಡಗಿತು.
ಮಹತ್ವದ ದಾಖಲೆಗಳನ್ನು ಪರಿಶೀಲಿಸಿದರು. ಶಿವಕುಮಾರ್ ಜೈಲಿನಲ್ಲಿದ್ದಾಗ ಕರ್ನಾಟಕ ಅನೇಕ ಮಹನೀಯರು, ಮಠಾಧಿಪತಿಗಳು ಇವರ ಮನೆಗೆ ಭೇಟಿ ನೀಡಿ ಇವರ ಕುಟುಂಬದವರಿಗೆ ಸಾಂತ್ವನ ಹೇಳಿದ್ದು 'ನನ್ನ ಜೀವನದಲ್ಲಿ ಎಂದೂ ಮರೆಯಲಾಗದಂಥದ್ದು ಎಂದು ಶಿವಕುಮಾರ್ ಹೇಳುತ್ತಾರೆ. ಜನ ಕೊಟ್ಟ ಪ್ರೀತಿ ಮತ್ತು ಅನುಕಂಪಕ್ಕೆ ನಾನು ಸದಾ ಚಿರಋಣಿ ಮತ್ತು ಅವರ ಋಣದಲ್ಲಿ ನಾನಿದ್ದೇನೆ ಎನ್ನುತ್ತಾರೆ ಇವರು. ಜೈಲಿನಿಂದ ಹೊರ ಬಂದಾಗ ವಿರೋಧಿಗಳ ಕಣ್ಣು ಕುಕ್ಕುವಂತೆ ಇವರಿಗೆ ಸ್ವಾಗತ ಸಿಕ್ಕಿದ್ದು ಮತ್ತು ಬೆಂಗಳೂರಿನಲ್ಲಿ ಅಭೂತಪೂರ್ವ ರ್ಯಾಲಿ ನಡೆದಿದ್ದು ರಾಷ್ಟಮಟ್ಟದ ದಾಖಲೆಯಾಗಿ ಸುದ್ದಿಯಾಯಿತು ಶಿವಕುಮಾರ್ ರಾಜಕೀಯ ಜೀವನ ಎಂದೂ ಹೂವಿನ ಹಾಸಿಗೆಯಾಗಿರಲಿಲ್ಲ. ಅನೇಕ ವಿರೋಧ, ಅಡೆತಡೆಗಳು ನಿರಂತರವಾಗಿ ಅವರ ಜೀವನದುದ್ದಕ್ಕೂ ಎದುರಾಗಿವೆ. ಶಿವಕುಮಾರ್ ಅವರನ್ನು ‘ಟಫ್’ ರಾಜಕಾರಣಿ, ಹಳ್ಳಿಯ ಸಹಜ ಒರಟುತನ ಅವರಲ್ಲಿ ಕಂಡುಬರುತ್ತದೆ ಎಂದು ಹೇಳುವವರಿದ್ದಾರೆ. ಆದರೆ ಅವರದ್ದು ನೇರನಡೆ- ನೇರನುಡಿ, ಮುಚ್ಚುಮರೆಯಿಲ್ಲದ ವ್ಯಕ್ತಿತ್ವ. ಶಿವಕುಮಾರ್ ಒಬ್ಬ ಸ್ನೇಹಜೀವಿ ಎನ್ನುವುದು ಅವರ ಆಪ್ತರಿಗೆ ಗೊತ್ತು. ಪಕ್ಷದ ನೆಲೆಗಟ್ಟಿನಲ್ಲೇ ಆಗಲಿ, ಚುನಾವಣೆಯ ಸಂದರ್ಭದಲ್ಲೇ ಆಗಲಿ, ಆಡಳಿತಾತ್ಮಕ ಬಿಕ್ಕಟ್ಟು ಎದುರಾದ ವೇಳೆಯಲ್ಲೇ ಆಗಲಿ, ಅಖಾಡಕ್ಕಿಳಿದು ಇಕ್ಕಟ್ಟು-ಬಿಕ್ಕಟ್ಟು ನಿವಾರಿಸುವಲ್ಲಿ ಶಿವಕುಮಾರ್ ಎತ್ತಿದ ಕೈ. ಹೀಗಾಗಿ ‘ಟ್ರಬಲ್ ಶೂಟರ್’ ಎಂಬ ಹೆಸರು ಅವರ ಅನ್ವರ್ಥನಾಮವೇ ಆಗಿಬಿಟ್ಟಿದೆ.
ರಾಜಕೀಯ ಪಾಠವನ್ನು ಶಿವಕುಮಾರ್ ಹತ್ತು ಹಲವು ನಾಯಕರಿಂದ ಕಲಿತಿರಬಹುದು ಆದರೆ ಅವರ ಅನುಭವಗಳು ಅವರಿಗೆ ಜೀವನದ ಪಾಠವನ್ನು ಕಳಿಸಿವೆ. . ಎಸ್ ಎಂ ಕೃಷ್ಣಾರವರು ವಿಧಾನ ಸಭಾ ಚುನಾವಣೆಯಲ್ಲಿ ಸೋತ ನಂತರ ರಾಜ್ಯ ಸಭೆಗೆ ಪ್ರವೇಶಿಸುವುದರಲ್ಲಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗುವುದರಲ್ಲಿ ಶಿವಕುಮಾರ್ ಅವರ ಪಾತ್ರ ಕೃಷ್ಣಾರವರ ಜೀವನಚರಿತ್ರೆಯಲ್ಲಿ ದಾಖಲಾಗಿರುವುದು ಗಮನಿಸಬೇಕಾದ್ದೇ. ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಅವರ ಆಪ್ತ ಬಳಗದಲ್ಲಿ ಅವರ ನೆಚ್ಚಿನ ಶಿಷ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಶಿವಕುಮಾರ್ ಮಾತಿಗೆ ಬದ್ಧ, ಸಮರಕ್ಕೂ ಸಿದ್ಧ...! ಶಿವಕುಮಾರ್ ಸುಲಭವಾಗಿ ತಾಳ್ಮೆ ಕಳೆದುಕೊಳ್ಳುವುದಿಲ್ಲ, ಯಾವುದೇ ವ್ಯತಿರಿಕ್ತ ಬೆಳವಣಿಗೆ/ಪರಿಣಾಮದಿಂದ ನಿರಾಶರಾಗುವುದಿಲ್ಲ, ಎಂಥದೇ ಸಮಸ್ಯೆಗೂ ತಲೆಕೆಡಿಸಿಕೊಳ್ಳುವುದಿಲ್ಲ. ಏನೇ ಬಂದರೂ ನಿಭಾಯಿಸ್ತೀನಿ ಅನ್ನೋ ನಿಲುವು ಅವರದ್ದು.
ಮಿಕ್ಕ ರಾಜಕಾರಣಿಗಳಿಗೆ ಹೋಲಿಸಿದರೆ ಕಡಿಮೆ ನಿದ್ರೆ, ಕಡಿಮೆ ಊಟ ಶಿವಕುಮಾರ್ ವೈಶಿಷ್ಟ್ಯ. ರಿಸ್ಕ್ ತೆಗೆದುಕೊಳ್ಳುವಿಕೆ ಇವರ ಮತ್ತೊಂದು ಬಲವಾದ ಗುಣ. ವೈಯಕ್ತಿಕ ರಾಜಕೀಯ ಭವಿಷ್ಯವನ್ನೂ ಲೆಕ್ಕಿಸದೆ ಪಕ್ಷದ ಹಿತಕ್ಕಾಗಿ ದುಡಿಯಲೆಂದು ವಿರೋಧಿಗಳ ಕೆಂಗಣ್ಣಿಗೆ ಗುರಿಯಾಗಿರುವ ನಿದರ್ಶನಗಳು ಸಾಕಷ್ಟಿವೆ. ತಮಗೆ ಒಳ್ಳೆಯದು ಮಾಡಿದವರ ಋಣಸಂದಾಯ ಮಾಡೋದು, ಸ್ನೇಹಕ್ಕೆ ಬದ್ಧರಾಗಿರುವುದು, ಅತೀವ ಪಕ್ಷನಿಷ್ಠೆ, ಕಡಿಮೆಯಾಗದ ನಿಯತ್ತು ಅವರ ವ್ಯಕ್ತಿತ್ವದಲ್ಲಿ ಹಾಸುಹೊಕ್ಕು. ಸಣ್ಣವರಿರುವಾಗಲೇ ವ್ಯವಹಾರ ಜಗತ್ತಿನಲ್ಲಿ ಆಸಕ್ತಿ ತಳೆದಿದ್ದ ಶಿವಕುಮಾರ್, ರಾಜಾಕಾರಣಿಯಾದವನು ವೈಯಕ್ತಿಕವಾಗಿಯೂ ಸಬಲನಾಗಿರಬೇಕು ಎಂಬ ಗ್ರಹಿಕೆಗೆ ಬದ್ಧರಾಗಿ, ಚಾಣಾಕ್ಷ ವ್ಯವಹಾರ ಮಾಡಿ ಸಂಪತ್ತು ವೃದ್ಧಿಮಾಡಿಕೊಂಡವರು. ರಾಜಕಾರಣಿಗಳು ಕಾನೂನು ಬದ್ಧ ವ್ಯವಹಾರ ಮಾಡುವುದು ತಪ್ಪಾ? ಎಂದು ಪ್ರಶ್ನಿಸುತ್ತಾರೆ ಶಿವಕುಮಾರ್. ತಮ್ಮ ವಯಸ್ಸು, ಅನುಭವಕ್ಕೆ ಮಿಗಿಲಾದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಪಕ್ಷದ ಹಿರಿಯರ ಕಣ್ಣಿಗೆ ಬಿದ್ದ ಶಿವಕುಮಾರ್, ತಮ್ಮ ವಿಶಿಷ್ಟ ಚಿಂತನೆ, ಚಾಣಾಕ್ಷ ತಂತ್ರ ಮತ್ತು ಅದ್ಭುತ ರಾಜಕೀಯ ಪಟ್ಟುಗಳ ಅರಿವಿನಿಂದಾಗಿ ವಿಭಿನ್ನ ರಾಜಕಾರಣಿಯಾಗಿ ಮುಂದೆ ಬಂದರು. ನೆಹರೂ ಗಾಂಧಿ ಕುಟುಂಬದ ಬಗ್ಗೆ ತಮಗಿರುವ ನಿಷ್ಠೆಯ ಬಗ್ಗೆ ಹೆಮ್ಮೆಯಿಂದ ಹೇಳುವ ಡಿಕೆ ಇಂದಿರಾ ಗಾಂಧಿಯವರು ವಿಧಿವಶರಾದ ದಿನ ಕನಕಪುರದಲ್ಲಿದ್ದ ತಮ್ಮ ಮಾಲೀಕತ್ವದ ಚಿತ್ರಮಂದಿರಕ್ಕೆ ಇಂದಿರಾ ಥಿಯೇಟರ್ ಎಂದು ಹೆಸರಿಟ್ಟಿದ್ದರು. ಆ ಕುಟುಂಬದ ಆದೇಶಗಳನ್ನು ಶ್ರದ್ಧೆಯಿಂದ ಪಾಲಿಸುವುದಾಗಿ ವಿನಮ್ರನತೆಯಿಂದ ಹೇಳುತ್ತಾರೆ. ಕರ್ನಾಟಕದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಡೆದಿರುವ ಎಲ್ಲಾ ಬೈ ಇಲೆಕ್ಷನ್ ಗಳಳ್ಳಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿನಿಂದ ಜವಾಬ್ದಾರಿ ಹೊತ್ತು ಬಹಳಷ್ಟು ಬಾರಿ ಕಾಂಗ್ರೆಸ್ ಗೆಲ್ಲುವಂತೆ ನೋಡಿಕೊಂಡಿದ್ದು ಪಕ್ಷದ ಕಾರ್ಯಕರ್ತರು ಹೆಮ್ಮೆಯಿಂದ ಹೇಳುವ ವಿಚಾರ. ಸಿದ್ದಾರಾಮಯ್ಯ ಅವರು ಸ್ಪರ್ಧಿಸಿದ ಉಪ ಚುನಾವಣಾ ಬಳ್ಳಾರಿ ಉಪಚುನಾವಣೆ ಕುಂದಗೋಲ್ ಗುಂಡ್ಲುಪೇಟ್ ಮುಂತಾದವು ಉದಾಹಣೆಗಾಳಿವೆ. ಬಹುತೇಕ ಎಲ್ಲ ಉಪಚುನಾವಣೆಗಳನ್ನು ಗೆಲ್ಲಿಸಿಕೊಟ್ಟ ಕೀರ್ತಿ ಶಿವಕುಮಾರ್ ಅವರದ್ದು. ಕಾಲಾನುಕಾಲಕ್ಕೆ ಬರುವ ರಾಜಕೀಯ ಸ್ಪರ್ಧೆಗಳಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಇವರು ಆಪದ್ಬಾಂಧವನಾಗಿರುವ ನಿದರ್ಶನಗಳು ಅನೇಕ. ಮಂತ್ರಿಯಾಗಿ ತಾವು ನಿರ್ವಹಿಸುತ್ತಿರುವ ಖಾತೆಗೆ ಸಂಬAಧಿಸಿದ ಕೆಲ ವಿಷಯಗಳು ಗೊತ್ತಿಲ್ಲದಾಗ, ಆ ಕುರಿತು ಅಧಿಕಾರಿಗಳು ಹೇಳಿದರೆ, ಸತತ ಅಧ್ಯಯನ ಮಾಡಿ ಅದನ್ನು ಕ್ಷಿಪ್ರವಾಗಿ ಕಲಿಯುವ ಚಿತ್ತಸ್ಥಿತಿ ಮತ್ತು ಸ್ವಭಾವ ಶಿವಕುಮಾರ್ ವಿಶೇಷ. ಇಂಧನ ಇಲಾಖೆಯಲ್ಲಿ ದಾಖಲೆಯ ಸಾಧನೆ ಮಾಡಿ ವಿಶ್ವದ ಗಮನವನ್ನು ಸೆಳೆದಿದ್ದು ಇವರ ಕಾರ್ಯ ಶೈಲಿಗೆ ಸಾಕ್ಷಿ. ಸ್ತ್ರೀ ಶಕ್ತಿ ಮುಂತಾದ ಹೊಸ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಡಿಕೆ ಶಿವಕುಮಾರ್ ಅವರ ಪಾತ್ರ ಶ್ಲಾಘನೀಯ. ರಾಜಕೀಯ ಬದುಕಲ್ಲಿ ಮಹತ್ತರ ಕನಸು ಕಟ್ಟಿಕೊಂಡಿರುವ ಶಿವಕುಮಾರ್, ರಾಜಕಾರಣಿಗಳಿಗೆ ತರಬೇತಿ ಸಿಗಬೇಕು, ಸಂವಹನಾ ಚಾತುರ್ಯ, ಆರ್ಥಿಕತೆಯ ಬಗ್ಗೆ ಅನುಭವ ಇರಬೇಕು, ವ್ಯಕ್ತಿತ್ವ ವಿಕಸನದ ವಿಷಯದಲ್ಲಿ ಅವರಿಗೆ ಆಸಕ್ತಿ ಇರಬೇಕು ಎಂದು ಬಯಸಿದವರು, ಬಯಸುವವರು.
ದಶಕಗಳ ನಂತರ ಕಾಂಗ್ರೆಸ್ಸಿಗೆ ‘ಸಿನಿಮಾ ಹೀರೋ’ ಥರದ ಮಾಸ್‌ಲೀಡರ್ ಸಿಕ್ಕಂತಾಗಿದೆ. ಕಾರಣ, ಜಾತಿ ಪ್ರಾಬಲ್ಯ, ಅನುಭವ, ಚಾಣಾಕ್ಷತನ, ಆಕರ್ಷಕ ವ್ಯಕ್ತಿತ್ವ, ಪ್ರಭಾವಶಾಲಿ ಧ್ವನಿ, ಸಂಘಟನಾ ಚಾತುರ್ಯ, ಪೌರುಷ, ವರ್ಚಸ್ಸು, ‘ಟ್ರಬಲ್ ಶೂಟರ್’ ಖ್ಯಾತಿ, ಅಚಲ ಪಕ್ಷನಿಷ್ಠೆ, ವಿಭಿನ್ನ ಇಲಾಖೆಗಳನ್ನು ದಕ್ಷತೆಯಿಂದ ನಿರ್ವಹಿಸಿದ ಅನುಭವ ಅವರಲ್ಲಿ ಕೆನೆಗಟ್ಟಿದೆ. ಉತ್ತಮ ಕೌಟುಂಬಿಕ ಹಿನ್ನೆಲೆ ಮತ್ತು ಕಳಂಕರಹಿತ ಖಾಸಗಿ ಜೀವನ, ಹಗರಣರಹಿತ ಆಡಳಿತ, ವ್ಯಾವಹಾರಿಕ ಯಶಸ್ಸು, ಭಾರತದಾದ್ಯಂತ ಸ್ನೇಹಿತರ ದಂಡು ಹೊಂದಿರುವಿಕೆ, ಅತೀವ ದೈವಭಕ್ತಿ, ಸಮಯಪ್ರಜ್ಞೆ, ಉತ್ತಮ ಮಾತುಗಾರಿಕೆ, ಧೈರ್ಯ, ಮುನ್ನುಗ್ಗುವ ಛಲ, ಅಸಾಧಾರಣ ಜ್ಞಾಪಕಶಕ್ತಿ ಈ ಎಲ್ಲ ಅಂಶಗಳ ಭಂಡಾರ ಈ ಶಿವಕುಮಾರ. ಅವರ ಈ ಗುಣ-ವಿಶೇಷಗಳೇ ಮಹತ್ವಾಕಾಂಕ್ಷಿ ಯುವ ಪೀಳಿಗೆಗೆ ಸ್ಫೂರ್ತಿ. ವಿದ್ಯಾರ್ಥಿ ನಾಯಕನಾಗಿದ್ದಾಗಲೇ ರಾಜೀವ್ ಗಾಂಧಿಯವರ ಗಮನಕ್ಕೆ ಬಂದು ವಿಧಾನ ಸಭೆ ಟಿಕೆಟ್ ಗಳಿಸಿ ಯುವನಾಯಕನಾಗಿ ರಾಜೀವ್ ಅವರ ಆಶೀರ್ವಾದದೊಂದಿಗೆ ಉತ್ತರ ಕೊರಿಯಾದ ಪಿಯೊನ್ಗ್ಯಾಂಗ್ ನಲ್ಲಿ ನಡೆದ World Student and Youth Festival Pyongyang ನಲ್ಲಿ ಭಾಗವಹಿಸಿ ತಮ್ಮ ವ್ಯಕ್ತಿದ್ವದ ಛಾಪು ಮೂಡಿಸಿದ್ದು ಈ ಶಿವಕುಮಾರ್ ಅವರು. ಇವರ ತಂದೆ ತಮ್ಮ ಮಗನನ್ನು ಇಂಜಿನಿಯರ್ ಮಾಡಬೇಕೆಂದಿದ್ದರೂ ಶಿವಕುಮಾರ್ ನಡೆದಿದ್ದು ರಾಜಾಕೀಯದ ಹಾದಿಯಲ್ಲಿ. ವಿದ್ಯಾರ್ಥಿ ದೆಸೆಯಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡಲಾಗಲಿಲ್ಲ ಎಂಬ ಕೊರಗನ್ನು ಅನುಭವಿಸಿದ ಶಿವಕುಮಾರ್ ಅವರು ಇಂದು ಪ್ರಖ್ಯಾತ ಇಂಜಿನಿಯರಿಂಗ್ ಕಾಲೇಜು ಮತ್ತಿತರ ಉತ್ತಮ ದರ್ಜೆಯ ವಿದ್ಯಾ ಸಂಸ್ಥೆಗಳನ್ನು ಪ್ರಾರಂಭಿಸಿ ಹೆಸರು ಮಾಡಿರುವುದು ಅನೇಕರು ಮೆಚ್ಚಿರುವ ಸಂಗತಿ. ತಮ್ಮ ೪೭ನೇ ವಯಸ್ಸಿನಲ್ಲಿ ಎಂಎ ಪರೀಕ್ಷೆಗೆ ಕೂತು ಪದವಿ ಪಡೆದಿದ್ದು ಇವರ ಛಲಕ್ಕೆ ಇನ್ನೊಂದು ಸಾಕ್ಷಿ. ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ಸ್ವೀಕರಿಸುವುದರೊಂದಿಗೆ ಕಾಂಗ್ರೆಸ್ ಪಕ್ಷವನ್ನು ಮಾಸ್ ಬೇಸ್ಡ್ ಪಾರ್ಟಿ ಎಂಬ ಹಣೆಪಟ್ಟಿಯಿಂದ ಕಾಡರ್ ಬೇಸ್ಡ್ ಪಾರ್ಟಿ ಯಾಗಿ ಪರಿವರ್ತನೆ ಮಾಡುವ ಕನಸು ಹೊತ್ತಿರುವ ಶಿವಕುಮಾರ್ ಪಕ್ಷದ ಕಾರ್ಯಕರ್ತರ ಧ್ವನಿಯೇ ಪಕ್ಷದ ಅಧ್ಯಕ್ಷರ ಧ್ವನಿಯಾಗಬೇಕು ಎಂಬ ಅಚಲ ನಂಬಿಕೆ ಉಳ್ಳವರು. ಈ ಕನಸುಗಳು ಈಡೇರುವುದು ಆ ಕನಸು ಕಂಡವರು ಡಿಕೆ ಶಿವಕುಮಾರ್ ಅಂಥವರಾಗಿದ್ದಾಗ ಮಾತ್ರ ಎಂದು ಅವರ ಬೆಂಬಲಿಗರು ಹೆಮ್ಮೆಯಿಂದ ಹೇಳುತ್ತಾರೆ.

Leave a message for DK Shivakumar